ಮಂಥನ
ಮಾಧ್ಯಮ,ನ್ಯಾಯಾಂಗದ ಜೊತೆ ಪ್ರಜೆಗಳೂ ಸಹ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ!

ಪ್ರಜಾ ಪ್ರಭುತ್ವದ ವ್ಯವಸ್ಥೆಯಲ್ಲಿ ಉತ್ತಮ ಸಮಾಜಕ್ಕೆ ಮಾಧ್ಯಮದ ಕೊಡುಗೆ ಅಪಾರ ಹಾಗೂ ಅತ್ಯಗತ್ಯ. ಇವೆರಡೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸ್ವಾತಂತ್ರ ಬಂದಾಗಿನಿಂದಲೂ ಹಿಡಿದು ಇತ್ತೀಚಿನ ದೆಹಲಿ ಗ್ಯಾಂಗ್ ರೇಪ್ ಪ್ರಕರಣ ಭ್ರಷ್ಟಾಚಾರ ಗಳನ್ನು ನೋಡಿದರೆ ಭವಿಷ್ಯದೆಡೆಗೆ ಆತಂಕ ಮೂಡುತ್ತಿದೆ.

ಮುಂದೊಂದು ದಿನ ನಾವು ಅಸಹಾಯಕತೆಯಿದ ಭಯೋತ್ಪಾದನೆಗೂ ಸಹ ತಲೆಬಾಗುವ ಸ್ಥಿತಿ ಎದುರಾದರೆ ಆಶ್ಚರ್ಯವಿಲ್ಲ.

ಇಂಥಹ ಪರ್ತಿಸ್ಥಿಯಲ್ಲೂ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ನಂಬುವುದು ಈ ಭ್ರಷ್ಟಾಚಾರ ಅತ್ಯಾಚರಗಳನ್ನು ತಡೆಯಲು ಸಮಾಜದ ನ್ಯೂನತೆಗಳನ್ನು ತಿದ್ದಲು, ಸಮಾಜದ ಸ್ವಾಸ್ಥ್ಯಕ್ಕಾಗಿ ಯಾವುದೇ ಒತ್ತಡಗಳಿಗೂ ಮಣಿಯದೇ ಕೆಲಸ ನಿರ್ವಹಿಸುವ ನ್ಯಾಯಾ’ಲಯ’ ಹಾಗೂ ಪ್ರಜಾಪ್ರಭುತ್ವದಲ್ಲಿ 4ನೇ ಅಂಗ ಎಂದು ಕರೆಸಿಕೊಳ್ಳುವ ಮಾಧ್ಯಮವನ್ನು.

ಆದರೆ ಬದಲಾದ ಕಾಲಘಟ್ಟದಲ್ಲಿ ಜನರ ನಂಬಿಕೆ ಹಾಗೂ ಸಮಾಜಕ್ಕೋಸ್ಕರವೇ ಕೆಲಸ ನಿರ್ವಹಿಸುವ ನ್ಯಾಯಾಲಯ ಹಾಗೂ ಮಾಧ್ಯಮಗಳು ಬದಲಾಗಿದೆ ಎಷ್ಟರ ಮಟ್ಟಿಗೆ ಎಂದರೆ ತಾವು ನಿರ್ವಹಿಸುವ ಕಾರ್ಯಗಳ ಬಗ್ಗೆ, ತಮ್ಮ ಧ್ಯೇಯೋದ್ದೇಶಗಳನ್ನು ಮರೆತು ಅದನ್ನು ಮತ್ತೆ ಹುಡುಕುವ ನಿಟ್ಟಿನಲ್ಲಿ ಆತ್ಮ ವಿಮರ್ಶೆ ಮಾಡಿಕೊಳ್ಳುವ ಸಂದರ್ಭ ಮಾಧ್ಯಮ ಹಾಗೂ ನ್ಯಾಯಾಂಗಕ್ಕೆ ಬಂದೊದಗಿದೆ. ಆದರೆ ಇಂಥಹ ವಿಮರ್ಶೆಗಳು ಅಗತ್ಯವೂ ಸಹ.

ಸರಿ, ಕಾಲಾನುಸಾರವಾಗಿ ಅದೆಷ್ಟೋ ಕಾನೂನುಗಳು ಬದಲಾಗುತ್ತವೆ(ಇದರಿಂದ ಅದೆಷ್ಟೋ ಮಂದಿಗೆ ಸಹಾಯವೂ ಆಗಿರುವುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇ ಬೇಕು) ನಮ್ಮ ದೃಶ್ಯ ಮಾಧ್ಯಮಗಳು ಸುದ್ದಿ ಬಿತ್ತರಿಸುವುದೂ ಅವುಗಳ ಕಾರ್ಯ ನಿರ್ವಹಣೆಯ ಶೈಲಿಯಲ್ಲಂತೂ ಅಗಾಧವಾದ ಬದಲಾವಣೆಗಳಾಗಿವೆ.

ಈ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ, ಮಾಧ್ಯಮಗಳು ಕಾರ್ಯ ನಿರ್ವಹಿಸುವುದರ ಬಗ್ಗೆ ಜ.20ರಂದು ಸಹ ಏರ್ಪಡಿಸಲಾಗಿತ್ತು. ಅಲ್ಲಿ ಸಮಾಜದ ಒಳಿತಿಗಾಗಿ, ಎರಡೂ ಕ್ಷೇತ್ರಗಳ ನ್ಯೂನತೆಗಳನ್ನು ಚರ್ಚಿಸಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಉತ್ತಮವಾದ ವಿಷಯಗಳು ಮಂಡನೆಯಾದವು.

ವಿಚಾರ ಸಂಕಿರಣದಲ್ಲಿ ಮಾಧ್ಯಮಗಳು ಮಿತಿಮೀರಿ ವರ್ತಿಸುತ್ತಿವೆ, ಪ್ರಮುಖವಾಗಿ ದೃಷ್ಯ ಮಾಧ್ಯಮಗಳು ಸುದ್ದಿಯ ಸತ್ಯಾಸತ್ಯತೆ ಅರಿಯದೆ ಸುದ್ದಿ ಬಿತ್ತರಿಸುತ್ತಿದೆ. ಅವು ಸ್ವಯಂ ಪ್ರೇರಿತರಾಗಿ ಕೆಲವು ವಿಷಯಗಳಲ್ಲಿ ತಮಗೆ ತಾವೇ ನಿರ್ಭಂಧ ಹಾಕಿಕೊಳ್ಳಬೇಕು ಎಂಬ ಇತ್ಯಾದಿ ಸಲಹೆಗಳನ್ನು ನೀಡದರು ಅಲ್ಲಿ ನೆರೆದಿದ್ದ ಸಭಿಕರು.

ಮಾಧ್ಯಮದಲ್ಲಿ ಬಿತ್ತರವಾದ ಸುದ್ದಿಯನ್ನು ಆಧರಿಸಿ(ಸುಮೋಟೊ) ಅಡಿಯಲ್ಲಿ ನ್ಯಾಯಾಲಯ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಅನೇಕ ಉದಹರಣೆಗಳಿವೆ ಈ ರೀತಿ ಮಾಧ್ಯಮಗಳಿವೆ ಈ ರೀತಿ ಮಾಧ್ಯಮಗಳಿಗೆ, ನೀಡುವ ಘನತೆಗೆ ಧಕ್ಕೆ ಬರಬಾರದೆಂಬ ಕಾರಣಕ್ಕೆ ಎಲ್ಲಾ ಸಲಹೆಗಳನ್ನು ಒಪ್ಪಲೇ ಬೇಕಾಗುತ್ತದೆ.

ಮಾಧ್ಯಮಗಳಿಗೆ ಈರೀತಿ ಸಲಹೆಗಳನ್ನು ನೀಡಲು ಇತ್ತೀಚಿನ ದಿನಗಳಲ್ಲಿ ಅವುಗಳ ವರ್ತನೆಯೂ ಸಹ ಹಾಗೆಯೇ ಇದೆ. ಉದಾಹರಣೆಗೆ ಇತ್ತೀಚೆಗೆ ಡಿಸೆಲ್ ದರ ಏರಿಕೆಯಾಗಿತ್ತು ಎಲ್ಲಾ ಮಾಧ್ಯಮಗಳು ಸಹ ಜನ ಸಾಮಾನ್ಯರ ಮೇಲೆ ಹೊರೆ ಬೀಳಲಿದ್ದ ಡಿಸೆಲ್ ಹಾಗೂ ಪೆಟ್ರೋಲ್ ದರ ಏರಿಸಿರುವುದರ ಬಗ್ಗೆ ವರದಿ ಹಾಗೂ ವಿಶ್ಲೇಷಣೆ ಮಾಡುವುದನ್ನು ಬಿಟ್ಟು ನಟ ದುನಿಯಾ ವಿಜಯ್ ಅವರ ಡಿವೋರ್ಸ್ ಪ್ರಕರಣವನ್ನು ದಿನ ಗಟ್ಟಲೆ ಪ್ರಸಾರ ಮಾಡಿತ್ತು. ಅಷ್ಟೇ ಏಕೆ ಯಾವುದೇ ಸೆಲೆಬ್ರಿಟಿಗಳ ಸ್ವಂತ ವಿಷಯವನ್ನು ಬಯಲಿಗೆಳೆಯಲ್ಲು ಚಾತಕ ಪಕ್ಷಿಗಳಂತೆ ಕಾಯುತ್ತಿರುತ್ತಾರೆ ನಮ್ಮ ದೃಶ್ಯ ಮಾಧ್ಯಮದವರು.

ಆದರೆ ಮತ್ತೊಂದು ದೃಷ್ಠಿಯಿಂದ ನೋಡಿದರೆ ಕೇವಲ ಮಾಧ್ಯಮ ಮತ್ತು ನ್ಯಾಯಾಂಗ ಹಾಗೂ ಅವುಗಳ ಕಾರ್ಯ ವ್ಯಾಪ್ತಿಯ ಬಗ್ಗೆ ವಿಮರ್ಶೆ ನಡೆಸುವುದರಿಂದ ಸಮಾಜಕ್ಕಾಗಲಿ ಅಥವಾ ಪ್ರಜಾಪ್ರಭುತ್ವಕ್ಕಗಲೀ ಯಾವುದೇ ಪರಿಣಾಮಕಾರಿ ಪ್ರಯೋಜನವಾಗುವುದಿಲ್ಲ.

ದೃಷ್ಯ ಮಾಧ್ಯಮ ಬೇಡದ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಯಾವುದೇ ಸೆಲಬ್ರಿಟಿಗಳ ಖಾಸಗಿ ವಿಷಯಗಳನ್ನು ದಿನಗಟ್ಟಲೆ ಬಿತ್ತರಿಸುತ್ತಾರೆ. ನ್ಯಾಯಾಂಗವೂ ಸಹ ಕೆಲವು ಅಪರಾಧಿಗಳ ಅಪರಾಧಗಳು ಸಾಬೀತಾಗಿದ್ದರೂ ರಾಜಕೀಯ ಒತ್ತಡದಿಂದ ಎಷ್ಟೋ ಕೇಸ್ ಗಳು ಖುಲಾಸೆಗೊಳಿಸುತ್ತದೆ. ಇಲ್ಲವೇ ಅಪರಾಧಿಗಳು ಯಾವುದೇ ಪ್ರಭಾವಿಗಳ ಮಕ್ಕಳೂ ಅಥವಾ ಸಂಬಂಧಿಗಳೋ ಆಗಿದ್ದರೆ ತೀರ್ಪು ಅವರ ಪರವಾಗಿ ಬಂದಿರುವ ಎಷ್ಟೋ ಪ್ರಕರಣಗಳು ಉದಾಹಣೆಯಾಗಿದೆ.

ಆದರೆ ಇಂಥಹ ಪರಿಸ್ಥಿತಿಯಲ್ಲೂ ದೆಹಲಿ ಗ್ಯಾಂಗ್ ರೇಪ್ ಪ್ರಕರಣದಂಥಹ ಪ್ರಕರಣದಲ್ಲಿ ಇಂದಿಗೂ ಸಹ ನ್ಯಾಯಾಂಗದ ಮೇಲಿರುವ ನಂಬಿಕೆ ಹಾಗೆಯೇ ಉಳಿದಿದೆ. ಆದರೆ ಇದೇ ನ್ಯಾಯಾಂಗ ದೆಹಲಿಯಲ್ಲಿ ಗ್ಯಾಂಗ್ ರೇಪ್ ನಡೆಯುವುದಕ್ಕೂ ಎರಡು ಮೂರು ದಿನಗಳ ಮುನ್ನ ಸಂದೇಶ್ ಅಭಂಗ್ ಎಂಬ ವ್ಯಕ್ತಿಯ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿ ಮಹತ್ವದ ತೀರ್ಪು ಪ್ರಕಟಿಸಿತ್ತು.

ಇಂಥಹ ತೀರ್ಪುಗಳನ್ನು ಗಮನಿಸಿದಾಗ ಜನರಿಗೆ ನ್ಯಾಯಾಂಗ, ಹಾಗೂ ಮಾಧ್ಯಮದ ಮೇಲೆ ಒಂದು ಕ್ಷಣ ಬೇಸರವಾಗುತ್ತದೆ. ವಿಮರ್ಶೆ, ಚರ್ಚೆ,ಸಂಕಿರಣಗಳನ್ನು ಇಂಥಹ ವಿಷಯಗಳನ್ನು ಕುರಿತು ಮಾಡಬೇಕಾದ ಅಗತ್ಯವಿದೆ ಎಂದು ಹೇಳಬಹುದು.

ಇವತ್ತು ಗ್ಯಾಂಗ್ ರೇಪ್ ಮಾಡುವ ವ್ಯಕ್ತಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂಬ ಆಗ್ರಹ ಸಾಮಜದ ಮೂಲೆ ಮೂಲೆಗಳಿಂದ ಕೇಳಿಬರುತ್ತಿದೆ. ಒಂದು ವೇಳೆ ಇಂಥಹ ಪ್ರಕರಣದಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗುವುದು ಸರಿ ಎಂದರೆ ಸಂದೇಶ್ ಅಭಂಗ್ ಗೂ ಸಹ ಮರಣ ದಂಡನೆ ಖಾಯಂ ಆಗಬೇಕಿತ್ತು.

ಆ ವ್ಯಕ್ತಿ ಮಾಡಿದ ಅಪರಾಧವೆಂದರೆ ಸೆಂಪ್ಟೆಂಬರ್ 2007ರಲ್ಲಿ ಪುಣೆಯ ಮೇಲ್ವರ್ಗದ ಕಾಲೋನಿಯೊಂದರಲ್ಲಿ ಒಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಅದೇ ಮನೆಯಲ್ಲಿ 65ವರ್ಷದ ವೃದ್ದೆಯನ್ನು 21 ಬಾರಿ ಚಾಕುವಿನಿಂದ ಇರಿದು ಒಂದು ಹಸ್ತದ ನಾಲ್ಕು ಬೆರಳುಗಳನ್ನು ಕತ್ತರಿಸಿ ಅಮಾನವೀಯತೆಯಿಂದ ಕೊಲೆ ಮಾಡಿದ್ದ. ಪರಿಣಾಮ ವೃದ್ಧೆ ಸಾವನ್ನಪ್ಪಬೇಕಾಯಿತು. ಈತ ಅತ್ಯಾಚಾವೆಸಗಿದ್ದ ಗರ್ಭಿಣಿ ಯುವತಿಯನ್ನೂ 19ಬಾರಿ ಚಾಕುವಿನಿಂದ ಇರಿದು ಕೊಲ್ಲಲು ಯತ್ನಿಸಿದ. ಅದೃಷ್ಟವಶಾತ್ ಆ ಯುವತಿ ಬದುಕುಳಿದಳು. ಮೂಲತಃ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಸಂದೇಶ್, ಮಾಡಿದ ಹೇಯ ಕೃತ್ಯ ಸಾಬೀತಾದ ನಂತರ ದೋಷಿಗೆ ಸೆಷನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು ಮಾರ್ಚ್ 2011ರಲ್ಲಿ ಬಾಂಬೆ ಹೈಕೋರ್ಟ್ ಕೂಡ ಈ ತೀರ್ಪನ್ನು ಎತ್ತಿ ಹಿಡಿದು ಅಪರಾಧ ಎಸಗಿರುವ ವ್ಯಕ್ತಿಗೆ ಕನಿಷ್ಠ ತಾನು ಮಾಡಿರುವ ಅಪರಾಧದ ಬಗ್ಗೆ ಕಿಂಚಿತ್ತೂ ಪಶ್ಚಾತಾಪವಿಲ್ಲ ಹಾಗಾಗಿ ಆತ ಕ್ಷಮೆಗೆ ಅನರ್ಹ ಎಂದಿತ್ತು.

ಅಪರಾಧಿ ಮಾಡಿದ ಅಪರಾಧದ ವಿವರಗಳನ್ನು ಪರಿಶೀಲಿಸಿ ಸೆಸನ್ಸ್ ಹಾಗೂ ಹೈಕೋರ್ಟ್ ಎರಡೂ ಸಹ ಒಂದೇ ತೆರನಾದ ತೀರ್ಪು ನೀಡಿತ್ತು. ಆದರೆ ಸುಪ್ರೀಂ ಕೋರ್ಟ್ ಮಾತ್ರ ಇಂಥಹದ್ದೊಂದು ಕೃತ್ಯ ಅಮಾನವೀಯವಾದದ್ದು ಎಂದು ಹೇಳಿತಾದರೂ ಸಂದೇಶ್ ಮಧ್ಯಪಾನ ಮಾಡಿದ್ದರಿಂದ ತಾನೇನು ಮಾಡುತ್ತಿದ್ದೇನೆ ಎಂಬುದೇ ಆತನಿಗೆ ಅರಿವಿರಲಿಲ್ಲ.

ಒಂದು ವೇಳೆ ಆತನಿಗೆ ಅವರಿಬ್ಬರನ್ನು ಸಾಯಿಸುವುದೇ ಮುಖ್ಯ ಉದ್ದೇಶವಾಗಿದ್ದರೆ ದೇಹದ ಯಾವುದೇ ಪ್ರಮುಖ ಅಂಗಕ್ಕೆ ಹಾನಿ ಮಾಡಿ ಅವರನ್ನು ಕೊಲ್ಲಬಹುದಿತ್ತು. ಅಷ್ಟೊಂದು ಬಾರಿ ಚಾಕುವಿನಿಂದ ಇರಿದು ಬೆರಳನ್ನು ತುಂಡು ಮಾಡಿ ಕೊಲೆ ಮಾಡಿರುವುದು ಅಸ್ವಾಭಾವಿಕ ವರ್ತನೆ ತೋರಿಸುತ್ತದೆ ಅಪರಾಧದ ಪ್ರಕರಣಗಳಲ್ಲಿ ತೀರ್ಪು ನೀಡುವ ಮುನ್ನ ಸಹಜ ವರ್ತನೆಯ ಅನುಪಸ್ಥಿತಿಯನ್ನೂ ಸಹ ಪರಿಗಣಿಸಬೇಕಾಗುತ್ತದೆ. ಅಲ್ಲದೆ ಹಿಂದೆ ಈತ ಇಂತಹ ಅಪರಾಧಗಳನ್ನೆಸಗಿದ ಉದಾಹರಣೆಗಳೂ ಇಲ್ಲ ಹಾಗಾಗಿ ಆತನಿಗೆ ಮರಣದಂಡನೆ ವಿಧಿಸುವುದು ಸೂಕ್ತವಲ್ಲ ಎಂದು ನ್ಯಾ.ಸ್ವತಂತ್ರ ಕುಮಾರ್ ಮತ್ತು ನ್ಯಾ.ಮದನ್ ಲೋಕೂರ್ ಅವರ ವಿಭಾಗೀಯ ಪೀಠ, 2013ರ ಜ. 6 ರಂದು ತೀರ್ಪು ನೀಡಿತ್ತು.

ಸರಿ ನ್ಯಾಯಾಲಯದ ಪ್ರಕಾರ ಮಧ್ಯಪಾನದಿಂದ ಮಾಡಿದ ಇಂಥಹ ಕೃತ್ಯಗಳನ್ನು ಮಾಡಿದ ವ್ಯಕ್ತಿಯನ್ನು ಮರಣದಂಡನೆಯಿ ಶಿಕ್ಷೆಯಿಂದ ಮನ್ನಿಸಬಹುದು. ಆದರೆ ಮಧ್ಯಪಾನ, ಹಿಂದೆ ಅಪರಾಧವೆಸಗಿಲ್ಲ ಎನ್ನುವುದು ಈಗಿನ ಅಪರಾಧದ ತೀವ್ರತೆಯನ್ನು ಕುಗ್ಗಿಸುವ ಅಥವಾ ಮರಣದಂಡನೆ ಶಿಕ್ಷೆಯಿಂದ ಪಾರಗಲು ಉಪಯೋಗವಾಗುವ ಮಾನದಂಡವಾಗಬಾರದು ಅಲ್ಲವೇ? ಇಂಥಹ ತೀರ್ಪುಗಳು ಪ್ರಜಾಪ್ರಭುತ್ವದ ಅತಃ ಸತ್ವವನ್ನೇ ಕಲಕುವಂತೆ ಮಾಡಬಾರದಲ್ಲವೇ?

ಆದರೂ ವಿವಿಧ ಕಾರಣಗಳಿಂದ ಅಪರಾಧಿಗಳಿಗೆ ಶಿಕ್ಷೆಯನ್ನು ಕಡಿಮೆ ಮಾಡಿರುವುದು(ಸನ್ನಡತೆಯ ಹೊರತಾಗಿ), ಅಪರಾಧ ಪ್ರಕರಣಗಳಿಂದ ಖುಲಾಸೆಗೊಳಿಸಿರುವುದು(ಭ್ರಷ್ಟಾಚಾರದಂಥಹ ಅಪರಾಧಗಳ ಹೊರತಾಗಿ) ಎಷ್ಟೋ ಉದಾಹರಣೆ ದೊರೆತೀತು.

ಇಷ್ಟಕ್ಕೂ ಈ ವಿಷಯವನ್ನು ಇಲ್ಲಿ ಏಕೆ ಪ್ರಸ್ತಾಪಿಸಬೇಕಾಯಿತೆಂದರೆ ಇವತ್ತಿನ ದಿನಗಳಲ್ಲಿ ಮಾಧ್ಯಮ ಹೇಗೆ ಸುದ್ದಿಯ ಸತ್ಯಾಸತ್ಯತೆ ಅರಿಯದೆ, ಕೇವಲ ಟಿ.ಆರ್.ಪಿಗೋಸ್ಕರ ಯಾವುದೋ ಬೇಡವಾದ ಕಾರ್ಯಕ್ರಮ, ಸೆಲಬ್ರಿಟಿಗಳ ಖಾಸಗಿ ಜೀವನದ ಬಗ್ಗೆ ದಿನಗಟ್ಟಲೆ ಕಾರ್ಯಕ್ರಮ ಮಾಡಿ ಅದರ ಮೌಲ್ಯವನ್ನು ತಾನೇ ಕಳೆದುಕೊಳ್ಳುತ್ತಿದೆಯೋ ಹಾಗೆಯೇ ಕೆಲವು ಕೋರ್ಟ್ ಗಳಲ್ಲಿ ಕೆಲವು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆವಿಧಿಸದೆ ಮನ್ನಿಸಲಾಗುತ್ತದೆ.

ಮಾಧ್ಯಮಗಳಿಗೆ ಅಧಿಕ ಟಿಆರ್ ಪಿ ದೊರೆಯುವುದು ಸಾರ್ವಜನಿಕರು ಆ ಪ್ರಮುಖ ಕಾರ್ಯಕ್ರಮಗಳನ್ನು ನೋಡಿದಾಗಲೇ ಅಲ್ಲವೇ? ಇಂಥಹ ಕಾರ್ಯಕ್ರಮಗಳನ್ನು ಬಾಯಿ ಚಪ್ಪರಿಸಿ ನೋಡುವವರು. ಇಂಥಹ ಕಾರ್ಯಕ್ರಮಗಳನ್ನು ಭಹಿಷ್ಕರಿಸುವ ವೀಕ್ಷಕರು ಎಷ್ಟು ಮಂದಿ ಇದ್ದಾರೆ?

ದೃಶ್ಯ ಮಾಧ್ಯಮಗಳು ಕೇವಲ ಟಿಆರ್ ಪಿ ಗೋಸ್ಕರ ದಿನಗಟ್ಟಲೆ ಬಿತ್ತರಿಸುವ ಕಾರ್ಯಕ್ರಮಗಳನ್ನು ನೋಡದೆ ಬಹಿಷ್ಕರಿಸಿದರೆ ಟಿ ಆರ್ ಪಿ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. ಆದರೆ ಈ ರೀತಿ ಅದೆಷ್ಟು ಜನ ಮಾಡುತ್ತಾರೆ? ಜನರಿಗೋಸ್ಕರವೇ ಇರುವ ದೃಶ್ಯ ಮಾಧ್ಯಮ ಬೆಳೆಯಲು ಜನರಿಂದ ಪ್ರೋತ್ಸಾಹ ಅತ್ಯಗತ್ಯ ಎಂದ ಮೇಲೆ ಮಾಧ್ಯಮಗಳನ್ನು ಸರಿದಾರಿಗೆ ತರುವಲ್ಲಿ ಸಾರ್ವಜನಿಕರ ಹಾಗೂ ಪ್ರಜಾ ಪ್ರಭುತ್ವದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿರಬೇಕು ಅಲ್ಲವೆ?

ಅದೇ ರೀತಿ ಕೆಲವು ಕೋರ್ಟ್ ಗಳಲ್ಲಿ ಕೆಲವು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗದೆ ಮನ್ನಿಸಲಾಗುತ್ತದೆ ಅಥವಾ ಶಿಕ್ಷೆಯ ಪ್ರಮಾಣ ಕಡಿಮೆಮಾಡಲಾಗುತ್ತದೆ. ಹಾಗಂತ ಖೈದಿಗಳಿಗೆ ವಿಧಿಸಿರುವ ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಬಾರದು ಅಂತ ಅಲ್ಲ.

ಮೇಲಿನಂಥಹ ಹೀನ ಕೃತ್ಯ ಸಾಬೀತಾದ ಮೇಲೂ ನ್ಯಾಯ ಎತ್ತಿ ಹಿಡಿಯ ಬೇಕಾದ ಸರ್ವೋಚ್ಛ ನ್ಯಾಯಾಲಯದಲ್ಲಿಯೂ ಅನ್ಯಾಯಕ್ಕೊಳಗಾಗದೆ ಇರುವವರಿಗೆ ನ್ಯಾಯ ದೊರಕಿಸಿಕೊಡದೆ, ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಿ ನ್ಯಾಯಾಂಗದ ಬಗ್ಗೆ ಇರುವ ವಿಶ್ವಾಸಕ್ಕೆ ಪ್ರಶ್ನೆ ಮೂಡುವ ಸ್ಥಿತಿ ನಿರ್ಮಾಣವಾದರೆ...? ಕೇವಲ ಯಾವುದೋ ಒಂದು ಗ್ಯಾಂಗ್ ರೇಪ್ ಆರೋಪಿಗಳಿಗೆ ಮರಣದಂಡನೆಯಾಗಬೇಕು ಎಂದು ಆಗ್ರಹಿಸಿ ಜಾಗೃತವಾಗುವ ಜನತೆಯ ಕಾಳಜಿ ಅದೇ ರೀತಿಯ ಪ್ರಕರಣಗಳಲ್ಲಿ ಅಪರಾಧಿಗೆ ಮರಣದಂಡನೆಯಿಂದ ಜೀವಾವಧಿ ಶಿಕ್ಷೆಗೆ ಇಳಿಸಿದಾಗ ಆ ಕಾಳಜಿ ಆ ಆಗ್ರಹ ತಣ್ಣಗಾವುದು ವಿಪರ್ಯಾಸವೇ ಸರಿ.

ಕೊನೆಯದಾಗಿ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿರುವ ನ್ಯೂನತೆಗಳು ಹಾಗೂ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಪ್ರಜಾಪ್ರಭುತ್ವದ ಆಧಾರಸ್ಥಂಬಗಳಾಗಿರುವ ನ್ಯಾಯಾಂಗ ಹಾಗೂ 4ನೇ ಅಂಗ ಎಂದೇ ಪರಿಗಣಿಸಲ್ಪಡುವ ಮಾಧ್ಯಮಗಳು ಸಂಕಿರಣ ಹಾಗೂ ವಿಮರ್ಶೆ ನಡೆಸುದರ ಜೊತೆಗೆ ಪ್ರಜಾಪ್ರಭುತ್ವದ ಜೀವಾಳವೇ ಆಗಿರುವ ಪ್ರಜೆಗಳು ಸಹ ತಮ್ಮ ಜವಾಬ್ದಾರಿ ಅರಿತು ಮಾಧ್ಯಮ ಹಾಗೂ ನ್ಯಾಯಾಂಗದಲ್ಲಿರುವ ಲೋಪದೋಷಗಳ ಬಗ್ಗೆ ಧ್ವನಿಗೂಡಿಸುವ, ವಿಮರ್ಶಿಸಿಕೊಳ್ಳುವ ಅಗತ್ಯವಿದೆ. ಆಗ ಮಾತ್ರವೆ ನಾವು ಆಚರಿಸುವ ಗಣರಾಜ್ಯೋತ್ಸವ, ಮತದಾರರ ದಿನಾಚರಣೆಗೆ ಒಂದು ನಿಜವಾದ ಅರ್ಥ!

image courtesy:www.chinadaily.com.cn

 


Readers' Comments (1)

Andy Riot17-08-2021:04:15:52 pm

As an editor from embroidery digitizing company US, it is quite likely to experience a terror, menace like No wonder to say that the every next day it is in line for us to face helplessly right and this is what this modern media is all poised to be make you watch.

Select Language : 
Press F12 to toggle Indian language and English
Your Name : 
Characters Remaining: 5000
 
 
Srinivas Rao

Recent Posts

Date :20-08-2014
Date :06-05-2014
Date :17-02-2014
Date :12-01-2014
Date :14-11-2013
Date :30-10-2013
Date :25-09-2013
Date :15-08-2013
Date :29-06-2013
Date :06-06-2013

Copyright © 2011 - 2013 Rishi Systems P. Limited. All rights reserved.