ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ,
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ!
ಇದು ವರ ಕವಿ ಬೇಂದ್ರೆ ಅವರು ಅತ್ಯಂತ ದುಖಃ ದಲ್ಲಿರುವಾಗ ಬರೆದ ಕವಿತೆ ಅಥವಾ ಶೋಕ ಗೀತೆ ಎನ್ನಲೂ ಬಹುದು.
ಹೌದು ಬರವಣಿಗೆಗೆ ಮಾತ್ರ ಅಂಥಹ ಶಕ್ತಿ ಇರುವುದು. ನೋವು-ನಲಿವುಗಳನ್ನು ಸಮಾನವಾಗಿ, ಪರಿಣಾಮಕಾರಿಯಾಗಿ ಅನಾವರಣಗೊಳಿಸಲು ಸಾಧ್ಯವಿದ್ದರೆ ಅದು ಬರವಣಿಯಿಂದ ಮಾತ್ರವೇ. ಬರಿ ನೋವು-ನಲಿವುಗಳಿಗಷ್ಟೇ ಅಲ್ಲದೆ ಸಮಾಜದ ಅಂಕು-ಡೊಂಕುಗಳನ್ನು ತಿದ್ದಲೂ ಸಹ ಬರವಣಿಗೆಯೊಂದೆ ಮಾರ್ಗ. ಅದಕ್ಕೆ ಅಲ್ಲವೇ "ಲೇಖನಿ ಖಡ್ಗಕ್ಕಿಂತ ಹರಿತ ಎಂಬ ಮಾತಿರುವುದು".
ಅದುವೆ ನಿತ್ಯ ನಿರಂತರ....., ಶೋಕ ಸಂತಸ ಏನೇ ಇರಲಿ ನಮ್ಮ ಸಾಹಿತಿಗಳ ಬರವಣಿಗೆ ಎಂದಿಗೂ ಅನನ್ಯ ಅನಂತ...... ಬೇಂದ್ರೆ, ವಿನಾಯಕ ಕೃಷ್ಣ ಗೋಕಾಕ್, ಗೋಪಾಲಕೃಷ್ಣ ಅಡಿಗ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ತ.ರಾ.ಸು, ಕುವೆಂಪು ಆದಿಯಾಗಿ ಅದೆಷ್ಟೋ ಸಾಹಿತಿಗಳು, ಬರವಣಿಗೆಯ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಅವರುಗಳಲ್ಲಿ ಹಲವರು ಇಂದು ನಮ್ಮೊಂದಿಗೆ ಇಲ್ಲ ನಿಜ. ಆದರೆ ಯಾವುದೇ ಪ್ರಶಸ್ತಿ ಪಡೆಯುವ ಉದ್ದೇಶ ಹೊಂದದೆ ಬರೆದ ಪುಸ್ತಕಗಳು ಕವನ ಸಂಕಲನಗಳು ಇಂದಿಗೂ ಜೀವಂತ. ಅಂಥಹ ಸಾಹಿತಿಗಳು ಪ್ರಶಸ್ತಿಗಾಗಿಯೋ ಅಥವಾ ಇನ್ನಾವುದೋ ಲೋಭಕ್ಕಾಗಿಯೋ ಬರೆಯದೆ ಸಹಜ ಭಾವನೆಗಳಿಂದ ಜನರ ಮನಸ್ಸನ್ನು ತಲುಪುತ್ತಿದ್ದರು. ಆದ್ದರಿಂದಲೇ ಅಲ್ಲವೇ ,ಅವರ ಕವಿತೆ, ಕಾದಂಬರಿಗಳು ಓದುಗರನ್ನು ಇಂದಿಗೂ ಸಹ ವ್ಯಾಪಿಸಿರುವುದು. ಕನ್ನಡ ಭಾಷೆಗೆ ಆಪತ್ತು ಬಂದೊದಗಿದೆ, ನಿಧಾನವಾಗಿ ಪರ ಭಾಷೆಯ ಮೇಲೆ ವ್ಯಾಮೋಹ ಬೆಳೆಯುತ್ತಿದೆ ಎಂಬ ಭಾವನೆಗಳ ನಡುವೆಯೂ ಕನ್ನಡದ ಬಗ್ಗೆ ನಮಗೆ ಇನ್ನೂ ಗೌರವ ಉಳಿದುಕೊಂಡಿರುವುದು ಅಂಥಹ ಮಾಹಾನ್ ಚೇತನಗಳಿಂದಲೇ ಅಲ್ಲವೆ.
ಆದರೆ.........
ಇಂದು ಆಗುತ್ತಿರುವುದಾದರೂ ಏನು? ಕನ್ನಡ ರಾಜ್ಯೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನಗಳಂಥಹ ಅಪರೂಪದ ಸಂಧರ್ಭಗಳಿಗೆ ಮಾತ್ರ ನಾವು ಕನ್ನಡಿಗರು ನಮ್ಮ ಮಾತೃ ಭಾಷೆ ಕನ್ನಡ ಎಂಬುದು ಅರಿವಿಗೆ ಬರುತ್ತದೆ. ಆ ಸಂಧರ್ಭಗಳಲ್ಲಿ ಮಾತ್ರವೇ ಸ್ವಭಾಷೆಯ ಬಗ್ಗೆ ಅಭಿಮಾನ ಹರಿಯುತ್ತದೆ. ಉಳಿದಂತೆ ಕನ್ನಡ ಬಂದರೂ ಸಹ ಸಂವನ ಕ್ರಿಯೆಗೆ ಮೈಲಿಗೆಯಾಗುವುದೇನೋ ಎಂಬಂತೆ ನಮ್ಮ ಮಾತೃ ಭಾಷೆಯನ್ನು ನೋಡಲಾಗುತ್ತಿದೆ.
ಪರಿಸ್ಥಿತಿ ಹೀಗೆ ಮುಂದುವರೆದರೆ, ಸಮಾಜಕ್ಕೆ ಅಮೋಘ ಕೊಡುಗೆಗಳನ್ನು ನೀಡಿದ್ದ ಅದೆಷ್ಟೋ ದೇಶಗಳು ಪ್ರಾಮುಖ್ಯತೆ ನೀಡಿ ಗೌರವಿಸಿದ್ದ ಸಂಸ್ಕೃತ ಭಾಷೆಯನ್ನು ನೆನಪಿಸಿಕೊಂಡು, ಅದನ್ನು ಪುನಶ್ಚೇತನ ಮಾಡುವ ಸ್ಥಿತಿ ಮುಂದೊಂದು ದಿನ ಕನ್ನಡಕ್ಕೂ ಬಂದರೆ ಆಶ್ಚರ್ಯವಿಲ್ಲ.
ಕನ್ನಡವನ್ನು ಅಭಿವೃದ್ಧಿ ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕನ್ನಡ ಪುಸ್ತಕ ಪ್ರಕಾಶನ, ಹೀಗೆ ಉತ್ಖನನ ಮಾಡಿದಷ್ಟು ಸಿಗುತ್ತದೆ. ಆದರೆ ಕನ್ನಡ ಭಾಷೆ ಮಾತ್ರ ತನ್ನ ಸತ್ವವನ್ನು ಕಳೆದುಕೊಂಡೇ ಬರುತ್ತಿದೆ.
ಕನ್ನಡವನ್ನು ನಮ್ಮ ಅವಿಭಾಜ್ಯ ಅಂಗವಾಗಿ ಭಾವಿಸುವ ಬದಲು ಕನ್ನಡ ರಾಜ್ಯೋತ್ಸವದ ಅಂಗವಾಗಿ ಒಂದು ತಿಂಗಳು ಪೂರ್ತಿ ಸಮಾರಂಭಗಳನ್ನು ನಡೆಸಿ ಋಣ ಮುಕ್ತರಾಗುವ, ಕನ್ನಡದ ಬಗ್ಗೆ ಉಡಾಫೆಯ ಮಾತನಾಡುವ ಕೆಟ್ಟ ಚಟ ನಮಗಂಟಿಕೊಂಡು ಎಷ್ಟೋ ಕಾಲವಾಗಿದೆ. ಆದರೂ ಭಾಷೆಯ ಮೇಲಿನ ಅಭಿಮಾನ ಶೂನ್ಯತೆಯನ್ನು ಒಪ್ಪಿಕೊಳ್ಳದೆ ಇಂಗ್ಲೀಷ್, ತಮಿಳು,ತೆಲುಗು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಹೆಚ್ಚುತ್ತಿದೆ ಆದ್ದರಿಂದ ಕನ್ನಡ ಮರೆಯಾಗುತ್ತಿದೆ ಎಂದು ಬೊಬ್ಬೆ ಹಾಕುತ್ತೇವೆ, ಆದರೆ ನಾವೆಷ್ಟು ಜನ ಮನೆಯಲ್ಲಿ ಕನ್ನಡ ಮಾತನಾಡುತ್ತೇವೆ, ಮುಂದಿನ ಪೀಳಿಗೆಗೆ ಅದರ ಸತ್ವವನ್ನು ತಿಳಿಸುತ್ತೇವೆ ಎಂದು ಪ್ರಶ್ನಿಸಿಕೊಳ್ಳಬೇಕಾಗುತ್ತದೆ.
ಇಷ್ಟಕ್ಕೂ ಇಂಗ್ಲೀಷ್ ಭಾಷೆಯಲ್ಲಿ ಪಾಂಡಿತ್ಯ ಪಡೆಯದಿದ್ದರೆ ಜೀವನವೇ ಶೂನ್ಯ ಎಂಬ ಭಾವನೆ ವ್ಯಾಪಕವಾಗಿ ಹರಡುತ್ತಿದೆ. ಅದಕ್ಕೆ ತಕ್ಕಂತೆ ಪೋಷಕರು ಸಹ ಪಕ್ಕದ ಮನೆ ಮಕ್ಕಳಿಂದ ಬೇಕಾದರೆ ಕನ್ನಡ ಬೆಳೆಯಲಿ ತಮ್ಮ ಮಕ್ಕಳು ಕನ್ನಡವನ್ನು ಹೇಗೋ ಮ್ಯಾನೇಜ್ ಮಾಡಿಕೊಂಡು ಇಂಗಿಷ್ ಕಲಿತರೆ ಭವಿಷ್ಯ ಸುಭದ್ರವಾಗಿರುತ್ತದೆ, ಇಲ್ಲದಿದ್ದರೆ ಆಧುನಿಕ ಜಗತ್ತಿನಲ್ಲಿ ಬದುಕುವುದು ಕಷ್ಟ ಸಾಧ್ಯ ಎಂಬ ನಿರ್ಧಾರಕ್ಕೆ ಬಂದೇ ಬಿಡುತ್ತಾರೆ. ಹೀಗೆ ಒಂದು ಭಾಷೆಯನ್ನು ಅತ್ಯಗತ್ಯವಾದ ಕಮಾಡಿಟಿ ರೀತಿಯಲ್ಲಿ ನೋಡುವ ಮುಂದಿನ ಪೀಳಿಗೆಯ ಇಂಥಹ ಮಕ್ಕಳಿಂದ ಭಾಷಾಭಿಮಾನವನ್ನು ಕಾಣಲು ಹೇಗೆ ತಾನೇ ಸಾಧ್ಯ?
ಇಂದು ನಮ್ಮ ಅಳಿದಿರುವ ಹಾಗೂ ಅಳಿವಿನ ಅಂಚಿನಲ್ಲಿರುವ ಜೀವ ಸಂಕುಲದಂತೆ ಅನೇಕ ಭಾಷೆಗಳು ಸಹ ಅಳಿದಿವೆ, ಅಳಿವಿನ ಅಂಚಿನಲ್ಲಿದೆ. ಅಳಿವಿನ ಅಂಚಿನಲ್ಲಿರುವ ಜೀವ ಸಂಕುಲದ ಪುನಶ್ಚೇತನಕ್ಕೆ ಪ್ರಯತ್ನ ನಡೆಸಲಾಗುತ್ತಿರುವ ರೀತಿ, ಅಳಿವಿನ ಹಾದಿ ಹಿಡಿದಿರುವ ತುಳು, ಕೊಡವ, ಸೇರಿದಂತೆ ಇನ್ನೂ ಅನೇಕ ಭಾಷೆಗಳ ಪುನರುತ್ಥಾನಕ್ಕೆ ಪ್ರಯತ್ನ ನಡೆಸಲಾಗುತ್ತಿದೆ. ಜೀವ ಸಂಕುಲದಂತೆ ಒಂದು ಭಾಷೆಯೂ ಕೂಡ ಅಳಿಯಬಹುದು ಎನ್ನುವುದಕ್ಕೆ ಸಂಸ್ಕೃತವೇ ಉತ್ತಮ ಉದಾಹರಣೆ.
ಆದ್ದರಿಂದ ಇಂದು ನಾವು ಕನ್ನಡದ ಉಳಿವಿನ ಬಗ್ಗೆಯೂ ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ. ಹಾಗೆಂದ ಮಾತ್ರಕ್ಕೆ ಇಂಗ್ಲೀಷ್ ಕಲಿಯಬಾರದು ಅಥವಾ ಇಂಗ್ಲೀಷ್ ಶಾಲೆಗಳನ್ನು ಮುಚ್ಚಬೇಕು ಎಂಬ ಹುಂಬತನವೂ ಬೇಡ. ನಮ್ಮ ಭಾಷೆಯನ್ನು ಗೌರವಿಸದಿರುವ ನಾವು ಅನ್ಯಭಾಷೆಯನ್ನು ದೂರುವುದು ಎಷ್ಟು ಸರಿ?
ಇಂದು ನಾವೆಲ್ಲರೂ ನೋಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಗೆ ಕನ್ನಡದ ಮೊದಲ ವಿಜ್ಞಾನ ಲೇಖಕರಲ್ಲೊಬ್ಬರಾದ, ಬೆಳ್ಳಾವೆ ವೆಂಕಟನಾರಣಪ್ಪನವರು, ಹಾಗೂ ವಿಶ್ವವೇ ಮೆಚ್ಚಿದ ಇಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯ ನವರ ಅಪಾರ ಕೊಡುಗೆ ಇದೆ.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ವೆಂಕಟನಾರಾಯಣಪ್ಪ ಅವರಿಗೆ ಭೌತಶಾಸ್ತ್ರ ಅಲ್ಲದೆ ಜೀವಶಾಸ್ತ್ರದಲ್ಲಿ ಕೂಡ ಪ್ರಾವೀಣ್ಯವಿತ್ತು. 193೦ರ ದಶಕದಲ್ಲಿ ಪ್ರಕಟವಾದ ಅವರ 'ಜೀವವಿಜ್ಞಾನ' ಕೃತಿ (ಮೈಸೂರು ವಿವಿ ಪ್ರಕಟಣೆ) ಕನ್ನಡ ವಿಜ್ಞಾನ ಸಾಹಿತ್ಯದ ಇತಿಹಾಸದಲ್ಲೇ ಅತ್ಯಂತ ಗಮನಾರ್ಹ ಸ್ಥಾನ ಪಡೆದುಕೊಂಡಿದೆ. ಕನ್ನಡದಲ್ಲಿ ವಿಜ್ಞಾನವನ್ನು ಪರಿಣಾಮಕಾರಿಯಾಗಿ ವಿವರಿಸಲು ಸಾಧ್ಯ ಎಂದೂ ಸಹ ಅವರು ತೋರಿಸಿಕೊಟ್ಟರು. ಈ ರೀತಿ ಕನ್ನಡದಲ್ಲಿ ವಿಜ್ಞಾನ ಪ್ರಚಾರಕ್ಕೆ ಮಾರ್ಗದರ್ಶಕರಾಗಿದ್ದರು ಬೆಳ್ಳಾರೆ ವೆಂಕಟನಾರಯಣಪ್ಪ.
ಅವರಂಥಹ ಎಷ್ಟೋ ಮಹನೀಯರು ವಿಜ್ನಾನ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿದ್ದರೂ ಅವರಿಗೆ ಅದಮ್ಯ ಭಾಷಾಭಿಮಾನವಿತ್ತು. ಆದರೆ ಇಂದು ಕನ್ನಡ ಮಾತೃ ಭಾಷೆಯ ವಿಜ್ನಾನಿಗಳು, ಇಂಜಿನಿಯರ್ ಗಳು, ಅಥವಾ ಇನ್ನಿತರ ಕ್ಷೇತ್ರಗಳಲ್ಲಿರುವ ಎಷ್ಟು ಜನರಿಗೆ (ಕೆಲವರನ್ನು ಹೊರತು ಪಡಿಸಿ) ಭಾಷೆಗೆ ಕೊಡುಗೆ ನೀಡುವ ಮನಸ್ಥಿತಿ ಇದೆ? ಅದನ್ನು ಬಿಡಿ, ಕನಿಷ್ಠ ಭಾಷಾಭಿಮಾನವಿದೆ ಎಂಬುದನ್ನು ಯೋಚಿಸಬೇಕಾಗಿದೆ?
ಅದಿರಲಿ, ಸಾಹಿತ್ಯದಿಂದ ಯಾವುದೇ ಭಾಷೆ ಶ್ರೀಮಂತಗೊಳ್ಳುತ್ತದೆ ಎಂಬ ಮಾತಿದೆ. ಆದರೆ ಇಂದು ಅಗ್ಗದ ಪ್ರಚಾರಕ್ಕಾಗಿ ಕೆಲಸಕ್ಕೆ ಬಾರದ ಹೇಳಿಕೆಗಳನ್ನು ನೀಡುತ್ತಾ ಕೇವಲ ಪ್ರಶಸ್ತಿಗಾಗಿ ಬರೆದು ಒಂದೆರಡು ಉನ್ನತ ಪ್ರಶಸ್ತಿ ಬಂದೊಡನೆ ಲೇಖನಿಯನ್ನು ತುಕ್ಕು ಹಿಡಿಯಲು ಬಿಟ್ಟಿರುವ ಕೆಲವು ಸಾಹಿತಿ(ಬುದ್ದಿಜೀವಿಗಳಿಂದ) ಅವರು ನಡೆಸುತ್ತಿರುವ ರಾಜಕೀಯಂದಿದಾಗಿ ಕನ್ನಡ ಸಾಹಿತ್ಯದ ಸತ್ವ ಕಳೆದು ಕೊಳ್ಳುತ್ತಿದೆ, ಪರಿಣಾಮ ಕನ್ನಡ ಸಾಹಿತ್ಯ ಓದುಗರೂ ಸಹ ಕಡಿಮೆಯಾಗುತ್ತಿದ್ದಾರೆ ಎನಿದುವುದಿಲ್ಲವೇ?
I am happy to find your distinguished way of writing the post. Now you make it easy for me to understand and implement the concept. Thank you for the post.aaj news live samaa news live dawn news live geo news live
This article has given me many new ideas. Hope you can continue to contribute your talent in this field. Thank you for sharing this great post.
bubble shooter