ಆ 3 ಮೂರು ವರ್ಷದ ಪುಟಾಣಿ, ತಾನು ಹುಟ್ಟಿರುವುದೇ ಶಾಲೆಗೆ ಹೋಗುವುದಕ್ಕಾಗಿ ಅಂತ ಅಂದುಕೊಂಡುಬಿಟ್ಟಿದೆಯೋ ಏನೋ, ಏನೇನೂ ಗಲಾಟೆ ಮಾಡದೆ ಸ್ಕೂಲ್ ಬ್ಯಾಗ್‌ನ್ನು ಬೆನ್ನಿಗೆ ಹಾಕಿಕೊಂಡು, ಕೈಯಲ್ಲೊಂದು ಟಿಫಿನ್ ಕ್ಯಾರಿಯರ್ ಹಿಡಿದುಕೊಂಡು ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಸ್ಕೂಲ್ ಬಸ್ಸು ಹತ್ತಿ ಹೋಗುತ್ತಿರೋದನ್ನು ನೋಡಿದ್ರೆ ಆಶ್ಚರ್ಯ ಆಗುತ್ತದೆ.
ಹುಟ್ಟಿ 4 ತಿಂಗಳಿಗೇ ಬೇಬಿ ಸಿಟ್ಟಿಂಗ್‌ನಲ್ಲಿ ಕುಳಿತು ಬೆಳೆದ ಮಗು ಅದು. ಅದಕ್ಕೆ ತಾನು ದಿನದ ೨೪ ಗಂಟೆಯೂ ಮನೆಯಲ್ಲಿದ್ದು, ಅಭ್ಯಾಸವೇ ಇಲ್ಲ. ಆ ಮಗುವಿನ ತಾಯಿ ತನ್ನ ಕಚೇರಿಗೆ ರಜಾ ಹಾಕಿ ಮನೆಯಲ್ಲಿರುವ ಸಮಯದಲ್ಲಿಯೂ ಕೂಡ, ಮಗುವನ್ನು ಬೇಬಿ ಸಿಟ್ಟಿಂಗ್ನಲ್ಲಿಯೇ ಬಿಟ್ಟು ಬರುತ್ತಾ ಇದ್ದಳು, ಅದೇ ಕಾರಣಕ್ಕಾಗಿಯೋ ಏನೋ.. ಆ ಮಗುವಿಗೆ ತನ್ನ ಮನೆಯ ಮೇಲೆ, ಅಂಥ ಮಮತೆ, ಸೆಳೆತ ಇಲ್ಲ ಅನ್ನಿಸುತ್ತೆ. ಇಂದಿನ ಮಕ್ಕಳಿಗೆ ತಾನು ಶಾಲೆಗೆ ಸೇರಿದ್ದೇ ನೆನಪಿರೋದಿಲ್ಲ. ಏಕೆಂದರೆ, ಅಷ್ಟು ಚಿಕ್ಕ ವಯಸ್ಸಿಗೇ ಅವರೆಲ್ಲ ಸ್ಕೂಲ್ ಮೆಟ್ಟಿಲು ಹತ್ತಿರುತ್ತಾರೆ.
ಮನೆಯಮುಂದೆ ಬಸ್ಸು ಬಂದು ಶಬ್ದ ಮಾಡಿದ ತಕ್ಷಣ, ತನ್ನಮ್ಮನಿಗೆ ಬಾಯ್ ಮಾಡಿ ಬಸ್ಸು ಹತ್ತಿ ಹೋದ ಆ ಪುಟಾಣಿಯನ್ನು ನೋಡುತ್ತಾ ಇದ್ದ ನನಗೆ ನನ್ನ ಬಾಲ್ಯ ನೆನಪಾಯ್ತು. ಶಾಲೆಯ ಹೆಸರು ಕೇಳಿದರೆ, ಅಲ್ಲಿಂದ ಕಾಲು ಕೀಳುತ್ತಿದ್ದವಳು ನಾನು. ನನ್ನನ್ನು ಶಾಲೆಗೆ ಸೇರಿಸಲು, ನಮ್ಮಪ್ಪ ಅಮ್ಮ ಕಷ್ಟಪಟ್ಟಿದ್ದು ನೆನಪಾಯಿತು. ಮನೆಯಲ್ಲಿ ಮುದ್ದು ಮಗಳಾಗಿ ೬ ವರ್ಷ ಆಟವಾಡಿಕೊಂಡಿದ್ದ ನನ್ನ, ಒಮ್ಮೆಲೇ ಶಾಲೆಗೆ ಹೋಗು ಅಂದರೆ..? ನನಗೆ ಬಹಳ ಕಷ್ಟವಾಗಿತ್ತು. ಈ ಶಾಲೆ ಯಾಕಾದರೂ ಇದೆಯೋ ಅನ್ನಿಸುತ್ತಿತ್ತು.
ನಮ್ಮ ಪುಟ್ಟ ಹಳ್ಳಿಯಲ್ಲಿ ನಮ್ಮದು 5 ಮನೆಗಳು ಒಟ್ಟಿಗೇ ಇರುವ ದೊಡ್ಡ ಕೇರಿ, ಆ ಕೇರಿಯಲ್ಲಿ ಮೂಲೆಯ ಮನೆ ನಮ್ಮದು, ಮನೆಯ ಮಂದೆ ಪುಟ್ಟ ಅಂಗಳ, ಅಂಗಳಕ್ಕೆ ತಾಗಿಯೇ ಇರುವ ದನದ ಕೊಟ್ಟಿಗೆ. ಕೊಟ್ಟಿಗೆಯ ತುಂಬಾ ದನಗಳು, ಕರುಗಳು. ಎಲ್ಲರ ಮನೆಯ ಕೊಟ್ಟಿಗೆಗೂ ಹೋಗಿ, ಕರುಗಳ ಜೊತೆ ಆಡವಾಡುತ್ತಿದ್ದೆ ನಾನು. ಮನೆಯಲ್ಲಿದ್ದ ಬೆಕ್ಕಿನ ಮರಿ, ನಾಯಿ ಮರಿ ಜೊತೆಯೇ ಕಾಲ ಕಳೆಯುತ್ತಿದ್ದೆ.
ತೋಟಗಳಲ್ಲಿ ಅಲೆದು, ಗುಡ್ಡ ಬೆಟ್ಟಗಳಲ್ಲಿ ಬೆಳೆದ ಹಣ್ಣುಗಳನ್ನು ತಿನ್ನುತ್ತಾ ಓಡಾಡಿಕೊಂಡಿದ್ದ ಬಾಲ್ಯ ನಮ್ಮದು. ಪೇರಲು ಹಣ್ಣು ಕೀಳಲು ಮರಹತ್ತಿ ಇಳಿಯುವುದಕ್ಕೆ ಬಾರದೇ ಕೂಗಿ ಕೂಗಿ, ಬಾಯಾರಿ ಗಂಟಲು ಒಣಗಿ, ಮರದ ಮೇಲೆಯೇ ಕುಳಿತಿದ್ದ ನನ್ನನ್ನು ಆ ದಾರಿಯಾಗಿ ಮನೆಗೆ ಹೋಗುತ್ತಿದ್ದ ನಮ್ಮ ಮನೆಯ ಆಳು ಶೇಕರ ಕಂಡು, ನನ್ನನ್ನು ಮರದಿಂದ ಇಳಿಸಿದ್ದ, ಅಂದಿನ ಆ ದೃಶ್ಯವನ್ನು ಇಂದಿಗೂ ರಸವತ್ತಾಗಿ ಹೇಳುತ್ತಾನೆ ಅವನು.
ನನ್ನಮ್ಮನ ಸೀರೆಯನ್ನು ಸುತ್ತಿಕೊಂಡು, ಅಂಗಳದಲ್ಲಿ ಬಿಂಕದಿಂದ ನಡೆದಾಡುತ್ತಿದ್ದ ನನ್ನನ್ನು ಪಕ್ಕದ ಮನೆಯವರೆಲ್ಲ ನೋಡಿ ನಕ್ಕು ಸಂತೋಷ ಪಡುತ್ತಿದ್ದರು, ಇಡೀ ಕೇರಿಯೂ ನನ್ನದೇ, ಅಲ್ಲಿ ಯಾರ ಮನೆಯಲ್ಲಾದರೂ ನನ್ನ ಊಟ, ತಿಂಡಿ ಮುಗಿದುಹೋಗುತ್ತಿತ್ತು.
ಅಣ್ಣಂದಿರ ಜೊತೆ ಹೊಳೆಗೆ ಹೋಗುವುದು, ಅವರು ಈಜಾಡುವುದನ್ನು ನೋಡಿ, ಖುಷಿ ಪಡುವುದು, ನನಗೂ ಕಲಿಸಿಕೊಡಿ ಅಂತ ಹಟ ಮಾಡೋದು, ಅವರು ನನ್ನನ್ನು ಸಂಬಾಳಿಸಿ ಮನೆಗೆ ಕರೆದುಕೊಂಡುಬರೋದು ಮಾಮೂಲಿಯಾಗಿತ್ತು.. ನನ್ನ ಹಟ ಅವರಿಗೆ ಅಭ್ಯಾಸವಾಗಿಹೋಗಿತ್ತು.
ಪುಟ್ಟಮಗುವಾಗಿದ್ದ ನನ್ನ ತಂಗಿ ತೊಟ್ಟಿಲಲ್ಲಿ ಮಲಗಿ, ಕಿಲ ಕಿಲ ನಗುತ್ತಿದ್ದಳು. ಅವಳನ್ನು ನಗಿಸಲು ಕುಣಿಯುತ್ತಾ, ಮಲಗಿಸಲು ಹಾಡು ಹೇಳುತ್ತಾ ಇದ್ದೆ, ಮನೆಯ ತುಂಬಾ ಓಡಾಡಿಕೊಂಡು ಹಾಯಾಗಿರುತ್ತಿದ್ದೆ. ಹಗಲು ಹೊತ್ತಿನಲ್ಲೆಲ್ಲ ಆಟವಾಡಿ, ಕುಣಿದು ಸುಸ್ತಾಗಿ ನಿದ್ದೆಹತ್ತಿದ ಕಣ್ಣಿನಲ್ಲಿರುವ ನನಗೆ ಊಟ ಮಾಡಿಸುವವಳು ನನ್ನ ಅಜ್ಜಿ. ಊಟವಾದ ತಕ್ಷಣ ಹಾಸಿಗೆ ಹಾಸಿ ನನ್ನನ್ನು ಮಲಗಿಸುವ ಜವಾಬ್ದಾರಿ ನನ್ನಪ್ಪನದು. ದಿನವೂ ಬೇರೆ ಬೇರೆ ರಸವತ್ತಾದ ಕಥೆ ಕೇಳುತ್ತಾ, ಅಪ್ಪನ ಮಡಿಲಿನಲ್ಲಿಯೇ ನಿದ್ದೆ ಮಾಡುತ್ತಿದ್ದೆ ನಾನು.
ಅಂತೂ ಇಂತೂ ಶಾಲೆಗೆ ಸೇರುವ ದಿನ ಬಂದೇಬಿಟ್ಟಿತ್ತು. ನೀನು ನಾಳೆಯಿಂದ ಶಾಲೆಗೆ ಹೋಗಬೇಕು, ಅಲ್ಲಿ ಓದುವುದಕ್ಕೆ ಬರೆಯುವುದಕ್ಕೆ ಹೇಳಿಕೊಡುತ್ತಾರೆ, ನೀನು ಕಲಿತು ದೊಡ್ಡವಳಾಗಿ ಸ್ಕೂಲ್‌ಟೀಚರ್‌ಆಗಬೇಕು ಅಂತ ನನಗೆ ನಿಧಾನವಾಗಿ ಹೇಳ್ತಾ ಇದ್ದಳು ನಮ್ಮಮ್ಮ. ಅವಳು ಎಷ್ಟೇ ಹೇಳಿದರೂ ನನಗೆ ಶಾಲೆ ಇಷ್ಟವೇ ಇರಲಿಲ್ಲ. ಅವಳು ಹೇಳುವ ಕಥಯನ್ನೆಲ್ಲ ಕೇಳಿ ನಂತರ ಕೊನೆಯಲ್ಲಿ ನಾನು ಶಾಲೆಗೆ ಹೋಗೋದಿಲ್ಲ ಅಂತಿದ್ದೆ. ನನ್ನನ್ನು ಶಾಲೆಗೆ ಕಳಿಸುವುದಾದರೂ ಹೇಗಪ್ಪ ಅನ್ನೋದೇ ಅಮ್ಮನ ಚಿಂತೆಯಾಗಿತ್ತು.
ಅವತ್ತು ಜೂನ್‌೧, ಬೆಳಿಗ್ಗೆ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಹಾಸಿಗೆಯಲ್ಲಿ ಬೆಚ್ಚಗೆ ಮಲಗಿದ್ದ ನನ್ನ ಬೇಗನೆ ಎಬ್ಬಿಸಿ, ಸ್ನಾನ ಮಾಡಿಸಿ, ಬಿಳಿ ಅಂಗಿ ನೀಲಿ ಸ್ಕರ್ಟು ತೊಡಿಸಿ, ರೆಡಿ ಮಾಡಿಬಿಟ್ಟಿದ್ದಳು ಅಮ್ಮ. ಹಾಸಿಗೆಯಿಂದ ಎದ್ದಾಗಿನಿಂದ ಸೊಳ್ಳೆರಾಗದಲ್ಲಿ ಅಳುತ್ತಿದ್ದ ನಾನು ಶಾಲೆಗೆ ಹೋಗುವ ಸಮಯ ಹತ್ತಿರ ಬಂದಾಗ, ಅಯ್ಯೋ ನಾನು ಶಾಲೆಗೆ ಹೋಗೋದಿಲ್ಲ ಎಂದು ಜೋರಾಗಿ ಅಳಲು ಶುರುವಿಟ್ಟುಕೊಂಡೆ, ನನ್ನ ಸಂಬಾಳಿಸುವುದೇ ಅಪ್ಪ ಅಮ್ಮಂಗೆ ತಲೆ ನೋವಾಗಿಹೋಯ್ತು.
ಅಪ್ಪ ಅಮ್ಮ ಏನೇ ಹೇಳಿದರೂ, ಸಮಾಧಾನ ಮಾಡಿ ಶಾಲೆಗೆ ಕರೆದೊಯ್ಯಲು ಎಷ್ಟೇ ಕಷ್ಟಪಟ್ಟರೂ ನಾನು ಸುಮ್ಮನಾಗಲೇ ಇಲ್ಲ. ಎಷ್ಟು ಚೆಂದದ ಪುಸ್ತಕ ನೋಡು, ಎಷ್ಟು ಸುಂದರ ಬಳಪ ನೋಡು ಶಾಲೆಯಲ್ಲಿ ನಿನ್ನಂತೆ ಇರುವ ಮಕ್ಕಳ ಜೊತೆ ನೀನು ಆಟವಾಡಬಹುದು ಎಂದೆಲ್ಲ ಹೇಳಿ ನನ್ನ ಅಳುವನ್ನು ಕಡಿಮೆ ಮಾಡಲು ಪ್ರಯತ್ನ ಪಟ್ಟರೂ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ನನ್ನ ಅಜ್ಜಿ, ತುಂಬ ಅಳುತ್ತಾಳೆ, ಶಾಲೆಗೆ ನಾಳೆ ಕರೆದುಕೊಂಡು ಹೋಗಪ್ಪ ಅಂತ ನಮ್ಮಪ್ಪಂಗೆ ಹೇಳಿದರೂ ಅಪ್ಪ ಕೇಳಲೇ ಇಲ್ಲ. ನನ್ನ ಕಿರುಚಾಟ ಮುಂದುವರೆಯುತ್ತಲೇ ಇತ್ತು.
ಅಲ್ಲಿಯೇ ನಿಂತಿದ್ದ ಶೇಕರನ ಹತ್ತಿರ, ಬುಟ್ಟಿ ತೆಗೆದುಕೊಂಡು ಬಾ ಅವಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ಹೊತ್ತುಕೊಂಡು ಹೋಗುತ್ತೇನೆ ಅಂದರು ನಮ್ಮಪ್ಪ. ಆಗ ನಾನು ಅಲ್ಲಿಂದ ಎದ್ದು ಓಡಲು ಪ್ರಾರಂಭ ಮಾಡಿದೆ. ನನ್ನ ಅಟ್ಟಿಸಿಕೊಂಡು ಬಂದ ಅಪ್ಪನಿಗೆ ನಾನು ಸಿಗಲಿಲ್ಲ. ಓಡಿಹೋಗಿ ಬಚ್ಚಲು ಮನೆಯ ಬಾಗಿಲು ಹಾಕಿಕೊಂಡುಬಿಟ್ಟೆ. ತುಂಬಾ ಹೊತ್ತು ಅಲ್ಲೇ ಇದ್ದೆ. ಅಮ್ಮ ಹೊರಗಿನಿಂದ ನನ್ನ ಕರೆದು ಕರೆದು ಸುಸ್ತಾದಳು. ಬಚ್ಚಲು ಮನೆಯಲ್ಲೇ ನಿಂತಿದ್ದ ನನಗೂ ಕೂಡ ಅತ್ತೂ ಅತ್ತೂ ಸುಸ್ತಾಗಿತ್ತು. ನಿಧಾನವಾಗಿ ಬಾಗಿಲು ತೆಗೆದು ಅಡಿಗೆ ಮನೆಗೆ ಹೋಗಿ ಅಮ್ಮನನ್ನು ಅಪ್ಪಿಕೊಂಡೆ.
ಅಮ್ಮ ನನ್ನ ಎತ್ತಿಕೊಂಡು, ಸಮಾಧಾನ ಮಾಡಿ, ಶಾಲೆಗೆ ಹೋಗಲು ಧೈರ್ಯ ತುಂಬಿದಳು. ಕಣ್ಣೀರು ಒರೆಸಿ, ಮುಖ ತೊಳೆಸಿ ಸಿದ್ಧಗೊಳಿಸಿದಳು. ನನ್ನಪ್ಪ ನಗುತ್ತಾ ನಗತ್ತಾ ನನ್ನ ಬಳಿ ಬಂದು, ಮಧ್ಯಾಹ್ನದ ತನಕ ಶಾಲೆಯಲ್ಲಿರು, ಆ ನಂತರ ನಾನೇ ಬಂದು ನಿನ್ನ ಮನೆಗೆ ಕರೆತರುತ್ತೇನೆ ಎಂದು ಹೇಳಿ ನನ್ನ ಶಾಲೆಗೆ ಕರೆದುಕೊಂಡು ಹೋದರು.
ಶಾಲೆಗೆ ಹೋಗುವುದು ಅಂದ್ರೆ, ಅದೇನೋ ಕಳೆದುಕೊಂಡವರಂತೆ ಭಾಸವಾಗುತ್ತಿತ್ತು ನನಗೆ. ಶಾಲೆ ಸೇರಿದ ಮೇಲೆ, ಶಾಲೆಯ ಪ್ರೀತಿ ಬಂದಿತ್ತಾದರೂ, ನನ್ನ ಶಾಲೆಗೆ ಕಳಿಸುವಾಗ ನಮ್ಮಪ್ಪ ಅಮ್ಮಂಗೆ ಸಾಕುಬೇಕಾಗಿತ್ತು. ಅದೊಂದು ದೊಡ್ಡ ಪ್ರಹಸನವೇ ನಡೆದುಹೋಗಿತ್ತು.
ಅದನ್ನೆಲ್ಲ ನೆನಪಿಸಿಕೊಂಡ ನನಗೆ, ಬೆಂಗಳೂರೆಂಬ ಮಹಾ ನಗರಿಯಲ್ಲಿಯ ಪುಟ್ಟ ಪುಟ್ಟ ಮಕ್ಕಳು, ಹುಟ್‌ಹುಟ್ತಾನೇ ಶಾಲೆಗೆ ಹೋಗುತ್ತವೆ ಅಂದ್ರೆ, ನಂಬುವುದಕ್ಕೇ ಆಗುವುದಿಲ್ಲ. ನಾವು 6 ವರ್ಷ ವಯಸ್ಸಿನ ತನಕ ಅನುಭವಿಸಿದ ಆ ಖುಷಿ, ಆಟ, ಪಾಟ, ನಲಿವು ಈ ಮಕ್ಕಳಿಗೆ ಸಿಗುತ್ತಲೇ ಇಲ್ಲವಲ್ಲ.. ಅಂತ ಅನ್ನಿಸುತ್ತಿತ್ತು. ಏನೇನೂ ಗಲಾಟೆ ಮಾಡದೆ, ಅಮ್ಮ ಕೊಟ್ಟ ಟಿಫನ್ ಬಾಕ್ಸ್‌ಹಿಡಿದು, ಸ್ಕೂಲ್‌ಬ್ಯಾಗ್‌ಏರಿಸಿಕೊಂಡು, ಪಕ್ಕದಲ್ಲೇ ನಿಂತಿದ್ದ ನನಗೂ ಟಾಟಾ ಮಾಡಿ ಸ್ಕೂಲ್‌ಬಸ್‌ಹತ್ತಿಹೋದ ಆ 3 ವರ್ಷದ ಪುಟ್ಟಿಯ ಬಗ್ಗೆಯೇ ಯೋಚನೆ ಮಾಡ್ತಾ ಕಳೆದುಹೋದೆ..
A beneficial and authentic topic for all, but there are also very interesting and reliableCIPD Business Assignment Help, available to get in all the way to the UK reactively.
Wow Thanks for making this valuable stuff post i really impressed this stuff such a wonderful article post keep doing great job
Prayer times australia
Stranger things is one of the top-rated tv series of 2022 and the Eddie Eunson is one of the main characters of this tv series so if you love to wear jeans vests so get this stunning Eddie Munson Vest
Stranger things is one of the top-rated tv series of 2022 and the Eddie Eunson is one of the main characters of this tv series so if you love to wear jeans vests so get this stunning Eddie Munson Vest
The expert that expect to Buy Essay Online from Essaywritingservices.ca , find such effective blog writing formate
Thanks for this post!If you like game geometry dash
If you want to Pay To Do My Assignment with structure that you can see in this article as well. I can get to there in most valued rates for you