ಸಾಧನೆಯ ದಾರಿಯಲ್ಲಿ....
"ಕೊಡಚಾದ್ರಿ ಪರಿಸರದಲ್ಲಿ ನಾನು"

ದೂರದಲ್ಲಿ ಮುಗಿಲನ್ನು ಚುಂಬಿಸಲೋ ಎಂಬಂತೆ ಎದ್ದು ನಿಂತ ಪರ್ವತ ಶ್ರೇಣಿಗಳಲ್ಲಿ ಒಂದಾದ ಕೊಡಚಾದ್ರಿ ಭೂಶಿಕರ. ಅವುಗಳ ಮೇಲೆ ಹಸಿರನ್ನೋದ್ದು ಕುಳಿತ ಕಾನನ ನಡುವಿನ ಕಂದಕಗಳಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ಮರಗಿಡಗಳು ನೂರಾರು ಅಡಿಯ ಪ್ರಪಾತದಲ್ಲಿ ಕರಿಬಂಡೆಗಳ ಮೇಲೆ ಹಾಲ್ನೊರೆಯುಕ್ಕಿಸುತ್ತಗಿ ಭೋರ್ಗರೆದು ಹರಿಯುವ ನದಿ ಬೆಟ್ಟದ ಮೇಲೆ ಬೆಳ್ಳಿ ಸುರಿದಂತೆ ಭಾಸವಾಗುವ ಜಲಧಾರೆ ಸುಯ್ಯೆಂದು ಬೀಸಿ ಬರುವ ಕುಳಿರ್ಗಾಳಿ ಹಕ್ಕಿಗಳ ಚಿಲಿಪಿಲಿ ಜೇನು ಹುಳುಗಳ ಝೇಂಕಾರ ಪ್ರವಾಸಿಗ ಕುಣಿದು ಕುಪ್ಪಳಿಸಲು ಇದಕ್ಕಿಂತ ಮತ್ತೋಂದು ತಾಣಬೇಕಾಗಿಲ್ಲ.

ನಿಸರ್ಗದ ಚೆಲುವನ್ನೆಲ್ಲಾ ಮೈಮೇಲೆ ಎಳೆದುಕೊಂಡು ಪ್ರವಾಸಿಗರ ಮನತಣಿಸಲೆಂದೇ ಸೃಷ್ಟಿಯಾಗಿರುವ ತಾಣವಾಗಿದೆ. ನಿಸರ್ಗ ನಿರ್ಮಿತ ಚೆಲುವಿನ ತಾಣವನ್ನು ನೋಡಲೆಷ್ಟು ಸುಂದರ.. ಮನಸಿಗೆ ಎಷ್ಟುಂದು ಆನಂದ... ಪರ್ವತ ಶ್ರೇಣಿಗಳಲ್ಲಿ ಇರುವ ದಟ್ಟ ಕಾನನದಲ್ಲಿ ಹೆಬ್ಬಂಡೆಗಳ ಮೇಲಿಂದ ಧುಮುಕುವ ಜಲಪಾತಗಳು, ಪ್ರಪಾತದಾಳದಲ್ಲಿ ಭೋರ್ಗರೆಯುವ ಗಿರಿಹೊಳೆಯ ಅದ್ದು, ಸುಯ್ಯೆಂದು ಬೀಸಿ ಬರುವ ಗಾಳಿ, ವನ್ಯ ಪ್ರಾಣಿಗಳ ಘೀಳಿಡುವ ಸದ್ದು ಚಿಲಿಪಿಲಿಯೋದಿಗೆ ಜೇನಿನ ಝೇಂಕಾರವು ನಿಸರ್ಗದ ಚೆಲುವನ್ನು ಅನುಭವಿಸಲೆಂದು ಬರುವ ಪ್ರವಾಸಿಗರ ಮನವನ್ನು ಬಡಿದೆಬ್ಬಿಸಿ ಕುಪ್ಪಳ್ಖಿಸಿ ಕುಣಿಯುವಂತೆ ಮಾಡಿಬಿಡುತ್ತದೆ.

ಕಾಡುಗಳಲ್ಲಿ ಸಸ್ಯ ವೈವಿಧ್ಯ ಹೆಚ್ಚಾಗಿ ಕಾಣಬಹುದಾಗಿದೆ. ಅರಣ್ಯದ ನಡುವೆ ನಿರ್ಮಾಣವಾಗಿರುವ ತಾಣವಾದುದರಿಂದ ಇಲ್ಲಿ ನಿಗದಿತ ಸಮಯಗಳಲ್ಲಿ ಮಾತ್ರ ಪ್ರವೇಶಾವಕಾಶವಿದ್ದು, ರಾತ್ರಿ ವೇಳೆಯಲ್ಲಿ ಈ ಮಾರ್ಗಗಳಲ್ಲಿ ಸಂಚರಿಸುವುದು ಅಪಾಯ. ಏಕೆಂದರೆ ಅರಣ್ಯ ವಲಯವಾದುದರಿಂದ ಕಾಡಾನೆ ಸೇರಿದಂತೆ ವನ್ಯ ಮೃಗಗಳು ಸಂಚಸುತ್ತಿರುತ್ತವೆ. ಇಲ್ಲಿಗೆ ಸಮೀಪದ ಗ್ರಾಮಗಳ ಮನೆಗಳಲ್ಲಿ ಪ್ರವಾಸಿಗರಿಗೆ ಊಟದ ವ್ಯವಸ್ಥೆಗಳಿವೆಯಾದರೂ ಆಹಾರ ಸಾಮಾಗ್ರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಜೊತೆಯಲ್ಲಿ ಕೊಂಡೊಯ್ಯುವುದು ಒಳ್ಳೆಯದು, ಒಂದುವೇಳೆ ಕೊಂಡೊಯ್ಯುವುದಕ್ಕೆ ನೆನೆಪು ಹೋದರೆ ಅಲ್ಲಿಯ ದೇವಸ್ಥಾನದ ಬಳಿ ಇರುವ ಆರ್ಚಕರ ಮೆನೆಯಲ್ಲಿ ಊಟಕ್ಕೆ ಮೊದಲೆ ತಿಳಿಸಿದರೆ ಉತ್ತಮ ಊಟ ಕೂಡ ಸಿಗುತ್ತದೆ. ಅಲ್ಲಿನ ಕಾನನದಲ್ಲಿ ಅಪರೂಪದ ಪ್ರಾಣಿ ಪ್ರಬೇಧ, ಪಕ್ಷಿ ಸಂಕುಲ, ಜಲಚರ, ಸಸ್ಯರಾಶಿ ಮತ್ತು ಅಪರೂಪದ ಕಪ್ಪೆ ಪ್ರಬೇಧಗಳಿವೆ, ಒಳನರು, ವಿವಿಧ ರಿತಿಯ ಮೀನುಗಳೂ ಇವೆ.

ಉಷ್ಣವಲಯದ ವಾತಾವರಣವಿದ್ದು ಅತಿ ಎತ್ತರದ ಪ್ರದೇಶಗಳಲ್ಲಿ ಮಾತ್ರ ಸಮಶೀತೋಷ್ಣವಲಯದ ಹವಾಮಾನವಿರುತ್ತದೆ. ಘಟ್ಟ ಪ್ರದೇಶಗಳಲ್ಲಿ ಸರಾಸರಿ ತಾಪಮಾನ ಉತ್ತರದಲ್ಲಿ 24 ಡಿಗ್ರಿ ಸೆಲ್ಸಿಯಸ್ ಮತ್ತು ದಕ್ಷಿಣದಲ್ಲಿ 28 ಡಿಗ್ರಿ ಕೆಲಭಾಗಗಳಲ್ಲಿ ಚಳಿಗಾಲದ ರಾತ್ರಿಯ ತಾಪಮಾನ ಶೂನ್ಯವನ್ನು ತಲುಪುವುದು. ಜೂನ್ ತಿಂಗಳಿನಿಂದ ಸೆಪ್ಟೆಂಬರ್ ವರೆಗಿನ ಮಳೆಗಾಲದಲ್ಲಿ ಇಲ್ಲಿ ಬೀಳುವ ಸರಾಸರಿ ಮಳೆ ವಾರ್ಷಿಕ 3000ದಿಂದ 4000 ಮಿಲಿ ಮೀಟರ್. ಕರ್ನಾಟಕದ ಕೆಲ ಭಾಗಗಳಲ್ಲಿ 9000 ಮಿ.ಮೀ. ವರೆಗೆ ಸಹ ಮಳೆ ಬೀಳುತ್ತದೆ. ಎಲೆ ಉದುರಿಸುವ ಕಾಡುಗಳು, ಕಡಿಮೆ ಮಳೆ ಕಂಡು ಹೆಚ್ಚು ಶುಷ್ಕವಾಗಿರುತ್ತದೆ.

 


Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
seema bhat
ನಮಸ್ಕಾರ.... ನಾನು ಮಲೆನಾಡಿನ ಭವ್ಯ ತಾಣವಾದ ಕೊಡಚಾದ್ರಿಯ ತಪ್ಪಲಲ್ಲಿ ಹುಟ್ಟಿ ಬೆಳೆದು, ಆಸೆ ಪಟ್ಟಂತಹ ಕೆಲಸದಲ್ಲಿ ಮುಂದುವರೆಯುತ್ತಿರುವ ಹುಡುಗಿ. ಒಳ್ಳೆ ಹೆಸರು ಸಂಪದಿಸಬೇಕೆಂಬ ಕನಸು ನನ್ನದು. ಮನಸ್ಸೇ

Copyright © 2011 - 2013 Rishi Systems P. Limited. All rights reserved.