ದೆಹಲಿಯಲ್ಲಿ 23ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತ ಘಟನೆಯಾಗಿದೆ. ಮಾತ್ರವಲ್ಲ ಇಡೀ ದೇಶಕ್ಕೆ ಕಪ್ಪುಚುಕ್ಕೆಯಂತೆ. ಈ ಘಟನೆ ಬಳಿಕ ಅದೆಷ್ಟೋ ಇಂಥ ಅಮಾನುಷ ಕೃತ್ಯಗಳು ರಾಷ್ಟ್ರ ರಾಜಧಾನಿ ಮಾತ್ರವಲ್ಲ ದೆಶದ ನಾನಾ ಭಾಗ ಸೇರಿದಂತೆ ರಾಜ್ಯದಲ್ಲಿಯೂ ದಿನದಿಂದ ದಿನಕ್ಕೆ ಬೆಳಕಿಗೆ ಬಂದಿವೆ, ಬರುತ್ತಲೇ ಇವೆ.
ಇಂಥಹ ಘಟನೆಗಳನ್ನು ಗಮನಿಸಿದರೆ ನಮ್ಮ ದೇಶ, ನಮ್ಮ ರಾಜ್ಯ, ನಮ್ಮ ನಗರಗಳಲ್ಲಿ ಸ್ತ್ರೀಯರಿಗೆ ಎಷ್ಟರಮಟ್ಟಿಗೆ ಭದ್ರತೆ-ರಕ್ಷಣೆ ಇದೆ? ಎನ್ನುವಂತ ಪ್ರೆಶ್ನೆ ಪ್ರತೀ ಮಹಿಳೆಯಲ್ಲೂ ಉದ್ಭವವಾಗುತ್ತದೆ. ಮಾತ್ರವಲ್ಲ ಇಂದಿನ ದಿನಗಳಲ್ಲೂ ಮಹಿಳೆ ಸಮಾಜದಲ್ಲಿ ಭಯಭೀತಳಾಗಿ ಬದುಕ ಬೇಕೆ ಎಂಬ ಆತಂಕ ತಣ್ಣಗೆ ಕೊರೆಯುತ್ತದೆ.
ನಮ್ಮದೇಶದಲ್ಲಿ ಮಹಿಳೆಗೆ ಅತ್ಯಂತ ಗೌರವ, ಪೂಜ್ಯನೀಯವಾದ ಸ್ಥಾನವನ್ನು ನೀಡಲಾಗುತ್ತದೆ ಎಂಬ ಮಾತಿದೆ. ಅಷ್ಟೇ ಏಕೆ ಯತ್ರ 'ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ:' ಎಂಬ ಸನಾತನ ನಾಣ್ನುಡಿ ನಮ್ಮದೇಶದಲ್ಲೇ ಸೃಷ್ಠಿಯಾಗಿದ್ದು, 'ಸ್ತ್ರೀ' ಬಗ್ಗೆ ಗೌರವದ ಮಾತನಾಡುವಾಗಲೆಲ್ಲ ಈ ವಾಖ್ಯವನ್ನು ಪುನರ್ ಪಠಣ ಮಾಡಲಾಗುತ್ತದೆ. ಇಂತಹ ಸಂಸ್ಕೃತಿ ಮೆರೆಯುವ ದೇಶದಲ್ಲಿ ಸ್ತ್ರೀ ಸಂಕುಲವೇ ಭಯಭೀತರಾಗುವಂತಹ ದೌರ್ಜನ್ಯಗಳು ನಡೆಯುತ್ತಿರುವುದು ಎಷ್ಟರ ಮಟ್ಟಿಗೆ ಸಭ್ಯತೆಯನ್ನು ಮೆರೆಯುತ್ತದೆ...?
ಇಷ್ಟೋಂದು ಟೆಕ್ನಾಲಜಿ ಮುಂದುವರೆದಿರುವಾಗ, ಪೊಲೀಸ್ ವ್ಯವಸ್ಥೆ ಭದ್ರವಾಗಿದೆ ಎಂಬ ಹೇಳಿಕೆ ನೀಡುತ್ತಿರುವಾಗ ಮಹಿಳೆಯರ ಮೇಲಿನ ದೌರ್ಜನ್ಯಗಳೂ ನಿರಂತರವಾಗಿ ಮುಂದು ವರೆಯುತ್ತಲೆ ಇದೆ ಎಂಬುದು ವಿಪರ್ಯಾಸವೇ ಸರಿ.
ಇನ್ನೆಷ್ಟುದಿನ ನಮ್ಮ ದೇಶದಲ್ಲಿ ಮಹಿಳೆಯರ ಮೇಲೆ ಇಂತ ದೌರ್ಜನ್ಯಗಳು ನಡೆಯುತ್ತವೆ ಎಂಬುದಕ್ಕೆ ಉತ್ತರ ಮಾತ್ರಸಿಗದು. ಆದರೆ ಒಂದಂತು ಸತ್ಯ. ಬಹುಷ: ಸ್ತ್ರೀಯರು ಒಕ್ಕೋರಲಿನಿಂದ ಇಂತ ಅಮಾನುಷ ಕೃತ್ಯ, ದೌರ್ಜನ್ಯಗಳ ವಿರುದ್ಧ ನಿರಂತರವಾಗಿ ಪ್ರತಿಭಟನೆ, ಹೋರಾಟಗಳನ್ನ ಹಮ್ಮಿಕೊಂಡು, ಕಾರ್ಯೋನ್ಮುಖರಾದರೆ, ಇಂತಹ ದೌರ್ಜ್ಯನದ ವಿರುದ್ಧ ಒಗ್ಗಟ್ಟಿನಿಂದ ಸಿಡಿದೆದ್ದರೆ ಸಮಾಜದಲ್ಲಿ ಇಂತ ಕೃತ್ಯಗಳಿಗೆ ಕಡಿವಾಣ ಬೀಳಬಹುದು.
ನಮ್ಮಲ್ಲಿ ಪ್ರತಿಭಟನೆಗಳು ನಡೆಯುತ್ತವೆ. ಆದರೆ ಅದು ಎಲ್ಲಿಯವರೆಗೆ ಅಂದರೆ ಇನ್ನೊಂದು ಹೊಸ ವಿಷಯಗಳು ಬರುವವರೆಗೆ ಮಾತ್ರ. ಇನ್ನೊಂದು ವಿಷಯ ಸಿಕ್ಕಿದಾಗ ಈ ಘಟನೆಗಳ ಬಗ್ಗೆ ಸಂಪೂರ್ಣ ಮರೆತಂತೆ ಇರುತ್ತೇವೆ. ಬಹುಷ: ಈ ಪರಿಯ ನಿಲುವಿನಿಂದಾಗಿಯೇ ಸಮಾಜದಲ್ಲಿ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿದೆ. ಯಾವುದೇ ಒಂದು ಕಾನೂನಾಗಲಿ, ಕೆಲಸವಾಗಲಿ ಸಂಪೂರ್ಣವಾಗಿ ಜಾರಿಗೆ ಬರುವವರೆಗೆ ಹೋರಾಡುವ ಮನೋಭಾವ ನಮ್ಮಲ್ಲಿಲ್ಲ.
ಎಂತಹ ದುರಂತದ ಸಂಗತಿ ಎಂದರೆ ಕೇರಳದ ಸೂರ್ಯನೆಲ್ಲಿಯಲ್ಲಿ 1996ರಲ್ಲಿ 16ವರ್ಷದ ಬಾಲಕಿ ಮೇಲೆ 40ದಿನಗಳಕಾಲ 42 ಜನರು ಅಮಾನುಷವಾಗಿ ನಡೆದುಕೊಂಡರು. ಈ ಪ್ರಕರಣದ ಆರೋಪಿಗಳೆಲ್ಲ ಖುಲಾಸೆಗೊಂಡಿದ್ದರು. ಅವತ್ತು ಸುಪ್ರೀಂ ಕೊರ್ಟ್ ನಲ್ಲಿ ಸಲ್ಲಿಸಲಾಗಿರುವ ಮೇಲ್ಮನವಿ ವಿಚಾರಣೆ ಈ ವರೆಗೆ ಬಾಕಿ ಇದೆ.
ಈ ಘಟನೆ ಅಥವಾ ಪ್ರಕರಣ ಕೇವಲ ಉದಾಹಣೆಯಷ್ಟೆ. ಆದರೆ ಇಂತಹ ಪ್ರಕರಣಗಳ ಸಂಖ್ಯೆ ನಮ್ಮರಾಜ್ಯದಲ್ಲೂ ಹೇರಳವಾಗಿಯೇ ಇದೆ. ಇದು ನಿಜಕ್ಕೂ ಒಂದು ರೀತಿಯ ದುರಂತವೆ ಸರಿ ಮಾತ್ರವಲ್ಲ ನಾಚಿಕೆಗೇಡಿನ ಸಂಗತಿ.
ಅದಿರಲಿ....
ದ.ಕೋರಿಯಾ ನ್ಯಾಯಾಲಯ, ಮಕ್ಕಳ ಮೇಲೆ ಅತ್ಯಾಚಾರವೆಸಗಿದ ಆರೋಪಿಯೊಬ್ಬನಿಗೆ 15ವರ್ಷಗಳ ಜೈಲು ಶಿಕ್ಷೆ ಹಾಗೂ ರಾಸಾಯನಿಕದ ಮೂಲಕ ವೀರ್ಯತ್ವ ನಾಶ ಶಿಕ್ಷೆಯನ್ನು ಜಾರಿಗೆ ತಂದಿದೆ. ಹೀಗೆ ಅತ್ಯಾಚಾರದಂತಹ ದೌರ್ಜನ್ಯವೆಸಗಿದ ಅಪರಾಧಿಗಳಿಗೆ ಗಲ್ಲುಶಿಕ್ಷೆಯಂತಹ ಕಠಿಣ ಕಾನೂನನ್ನು ಜಾರಿಗೆ ತರಬೇಕು. ಇಂತಹ ಘೋರ ಶಿಕ್ಷೆ, ಕಾನೂನನ್ನು ನಮ್ಮ ದೇಶದಲ್ಲೂ ಜಾರಿಗೆ ತಂದರೆ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಖಂಡಿತವಾಗಿ ನಿಲ್ಲುತ್ತವೆ. ಆದರೆ ಈ ಬಗ್ಗೆ ಸರ್ಕಾರ ಮನಸ್ಸುಮಾಡಬೇಕಷ್ಟೆ.
ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳ ಬಗ್ಗೆ ಸತ್ಯಾ ಸತ್ಯತೆ ಗೊತ್ತಿದ್ದರೂ ಈ ಕುರಿತು ಒಂದು ಕಠಿಣ ಕಾನೂನು ಜಾರಿಗೆ ತರಲು ಇಷ್ಟೊಂದು ವಿಳಂಬವಾದರೂ ಏಕೆ ಎಂಬುದಕ್ಕೆ ಉತ್ತರ ಮಾತ್ರ ಯಕ್ಷ ಪ್ರಶ್ನೆ.
ಅದೇನೆ ಇರಲಿ ಮಹಿಳೆಯರಿಗೆ ಸಮಾಜದಲ್ಲಿ ಭದ್ರತೆ-ರಕ್ಷಣೆ ಬೇಕೆಂದರೆ ಮಹಿಳೆಯರೇ ಜಾಗೃತರಾಗಿ ಒಗ್ಗಟ್ಟಿನಿಂದ ಸಿಡಿದೆದ್ದು, ದೌರ್ಜನ್ಯದ ವಿರುದ್ಧ ಕಠಿಣ ಕಾನೂನು ಜಾರಿಗೆ ಬರುವವರೆಗೆ ಹೋರಾಡ ಬೇಕು. ಅಂದಾಗ ಮಾತ್ರ ಇಂತಹ ದುರಂತ ತಪ್ಪುತ್ತದೆ ಎಂಬುದು ನನ್ನ ಅಭಿಪ್ರಾಯ.
I am happy to find your distinguished way of writing the post. Now you make it easy for me to understand and implement the concept. Thank you for the post.city 41 live city 42 live euro news live